Ashwaveega News 24×7 ಫೆಬ್ರವರಿ 25 – 2026 : ರಾಜ್ಯ ರಾಜಕೀಯದಲ್ಲಿ ಹೊಸ ತಿರುವು . ಸಿಎಂ ಸಿದ್ದರಾಮಯ್ಯ ಅವರ “ಕುರ್ಚಿ” ಸುತ್ತ ಮತ್ತೆ ಚರ್ಚೆಗಳು ಗರಿಗೆದರಿವೆ. ಇದುವರೆಗೆ ಡಿಕೆಶಿ ಪವರ್ ಫೈಟ್ ಮಾತ್ರವೇ ಸಿಎಂಗೆ ಸವಾಲು ಎಂದು ಹೇಳಲಾಗುತ್ತಿತ್ತು. ಆದರೆ ಈಗ ಕಥೆ ಮತ್ತೊಂದು ದಿಕ್ಕಿಗೆ ತಿರುಗಿದಂತಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಅವರ ತಂಡ ಮಾತ್ರವಲ್ಲ, ಸಿದ್ದು ಆಪ್ತರ ವಲಯದಲ್ಲಿಯೂ ಚಟುವಟಿಕೆಗಳು ಜೋರಾಗಿವೆ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಸಿಎಂ ಜೊತೆಗಿದ್ದವರೇ ತೆರೆಮರೆಯಲ್ಲಿ ಮಸಲತ್ತು ನಡೆಸುತ್ತಿದ್ದಾರಾ ? ಎಂಬ ಪ್ರಶ್ನೆ ಉದ್ಭವಿಸಿದೆ .
“ದಲಿತ ಸಿಎಂ” ಬೇಡಿಕೆ ಹೊಸದಲ್ಲ. ಆದರೆ ಈಗ ಈ ಬೇಡಿಕೆ ಸಿದ್ದು ಆಪ್ತರಿಂದಲೇ ಜೋರಾಗುತ್ತಿದೆ . “ಈ ಅವಧಿಯಲ್ಲೇ ಅವಕಾಶ ಸಿಗಲಿ” ಎಂಬ ಲೆಕ್ಕಾಚಾರದಿಂದ ಕೆಲ ನಾಯಕರು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂಬ ಸುಳಿವುಗಳು ಕೇಳಿಬರುತ್ತಿವೆ .
ಸಿದ್ದು ಜತೆ ನಾವಿದ್ದೇವೆ ಎನ್ನುವ ಕೆಲ ನಾಯಕರು, ತಮ್ಮನ್ನೇ ಭವಿಷ್ಯದ ಸಿಎಂ ರೇಸ್ನಲ್ಲಿ ಇಡುವ ಪ್ರಯತ್ನದಲ್ಲಿದ್ದಾರಾ ? ಪವರ್ ಫೈಟ್ನಲ್ಲಿ “ದಲಿತ” ದಾಳ ಉರುಳಿಸಿ, ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಪಡೆಯುವ ತಂತ್ರ ನಡೆಯುತ್ತಿದೆ ಎನ್ನುವ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ .
ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಕೆಲವರು ತಮ್ಮ ಹಾಜರಾತಿ ನೋಂದಾಯಿಸುತ್ತಿರುವುದು ಗಮನ ಸೆಳೆದಿದೆ. ಇದು ಕೇವಲ ರಾಜಕೀಯ ಸೌಜನ್ಯವೇ ? ಅಥವಾ ನಾಯಕತ್ವ ಬದಲಾವಣೆ ಚರ್ಚೆಯ ಭಾಗವೇ ? ಎಂಬ ಪ್ರಶ್ನೆ ಮೂಡಿದೆ .
ಒಟ್ಟಾರೆ, ಸಿದ್ದು–ಡಿಕೆಶಿ ಬಣಗಳ ನಡುವೆ ನಡೆಯುತ್ತಿರುವ ಪವರ್ ಫೈಟ್ಗೆ ಈಗ “ದಲಿತ ಸಿಎಂ” ಅಜೆಂಡಾ ಹೊಸ ತೀವ್ರತೆ ನೀಡಿದಂತಾಗಿದೆ . ಸಿಎಂ ಸಿದ್ದರಾಮಯ್ಯಗೆ ಜೊತೆಯಿದ್ದವರೇ ಖೆಡ್ಡಾ ತೋಡುತ್ತಿದ್ದಾರಾ ? ಅಥವಾ ಇದು ರಾಜಕೀಯ ಊಹಾಪೋಹಗಳಷ್ಟೇನಾ ? ಮುಂದಿನ ಬೆಳವಣಿಗೆಗಳು ರಾಜ್ಯ ರಾಜಕೀಯದ ದಿಕ್ಕು ನಿರ್ಧರಿಸಲಿದೆ .
