Ashwaveega News 24×7 ಡಿಸೆಂಬರ್. 01: ಮನೆಯಲ್ಲಿ ಕೆಲಸದವರನ್ನು ಬಿಟ್ಟು ಮದುವೆ ಸಮಾರಂಭಕ್ಕೆ ಹೋಗುವವರಿಗೆ ಸಂಕಷ್ಟ ಎದುರಾಗಿದೆ. ಮನೆಯ ಕಾವಲಿಗೆ ನಿಂತವರನ್ನು ಯಾಮಾರಿಸಿ ಮನೆಗೆ ನುಗ್ಗಿ ಕಳ್ಳತನ ಮಾಡುವ ಕೃತ್ಯಗಳ ಹೆಚ್ಚಾಗುತ್ತಿವೆ.
ಬಟ್ವಾಳ ಇರಾ ಗ್ರಾಮದಲ್ಲಿ ಬಾನುವಾರ ಈ ಕೃತ್ಯ ನಡೆದಿದೆ.. ಕುರಿಯಾಡಿ ಪದ್ಮನಾಭ ಅವರ ಮಗಳ ಮದುವೆಗಾಗಿ ಮನೆ ಮಂದಿ ಮಂಜೇಶ್ವರ ಪೈವಳಿಕೆಗೆ ಹೋಗಿದ್ದರು. ಮನೆಯನ್ನು ನೋಡಿಕೊಳ್ಳಲು ಇಬ್ಬರು ಮಹಿಳೆಯರನ್ನು ಬಿಟ್ಟು ಹೋಗಿದ್ದರು.. ಮಧ್ಯಾಹ್ನ 1ರ ಸುಮಾರಿಗೆ ಬೈಕಿನಲ್ಲಿ ಬಂದಾತ ಪದ್ಮನಾಭ ಅವರು ಮನೆಯಲ್ಲಿ ವಿದ್ಯುತ್ ಸರಿಯಿಲ್ಲ ಎಂದು ಕಾಲ್ ಮಾಡಿ ಬರುವುದಕ್ಕೆ ಹೇಳಿದ್ದಾರೆ ಎಂದು ಹೇಳಿ ಮನೆಯ ಒಳಗೆ ನುಗ್ಗಿದ್ದಾನೆ.
ವಿದ್ಯುತ್ ಪ್ಯೂಸ್ಗಳನ್ನು ನೋಡಿ ದುರಸ್ತಿಯ ನಾಟಕ ಮಾಡಿದ ಆ ಸ್ವಾಮಿ , ಮಹಿಳೆಯರನ್ನು ನೆಲದಲ್ಲಿ ನಿಲ್ಲಬೇಡಿ , ಮರದ ಮಣೆಯ ಮೇಲೆ ನಿಲ್ಲಬೇಕು ಎಂದು ಹೇಳಿದ್ದಾನೆ.. ಅವರು ಮಣೆ ಮೇಲಿ ನಿಂತಿದ್ದಾಗ ನೇರವಾಗಿ ಕೋಣೆಗೆ ಹೋದನು.
ಅವನ್ನು ಹಿಂಬಾಲಿಸಿದ ಮಹಿಳೆಯ ಬಳಿ ನೀವು ಬರಬೇಡಿ. ಶಾಕ್ ಹೊಡೆಯುತ್ತದೆ ಎಂದು ಹೇಳಿ ಹೆದರಿಸಿ ಅವರು ಕೋಣೆಗೆ ಬರದಂತೆ ನೋಡಿಕೊಂಡಿದ್ದ.
ಬಳಿಕ ಕೋಣೆಯೊಳಗೆ ಇದ್ದ 20 ಸಾವಿರ ರೂ. ನಗದು, 2 ಪವನ್ ತೂಕದ ಒಂದು ಜೊತೆ ಕಿವಿಯ ಬೆಂಡೋಲೆಯನ್ನು ತೆಗೆದು ಕೊಂಡು ಪರಾರಿಯಾಗಿದ್ದಾನೆ.
ಮನೆಮಂದಿ ಮದುವೆ ಮುಗಿಸಿ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.. ಸದ್ಯ ಈ ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಕುರಿಯಾಡಿ ಪದ್ಮನಾಭ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
