Ashwaveega News 24×7 ನವೆಂಬರ್. 28: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮ ಧ್ವಜಾರೋಹಣ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ದೀರ್ಘಕಾಲದ ರಾಮಮಂದಿರ ಹೋರಾಟಕ್ಕೆ ಇದು 500 ವರ್ಷಗಳ ಹೋರಾಟಕ್ಕೆ ತಾತ್ವಿಕ ಅಂತ್ಯ ದೊರೆತಿದೆ. ಸಂಪೂರ್ಣವಾಗಿ ನಿರ್ಮಾಣಗೊಂಡಿರುವ ರಾಮಮಂದಿರವನ್ನು ಇಂದು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದಾರೆ.ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೇಶದ ಮೂಲೆ ಮೂಲೆಗಳಿಂದ ಗಣ್ಯಾತೀಗಣ್ಯರು ಅಯೋಧ್ಯೆಗೆ ಬಂದಿದ್ದರು. ಈ ವಿಶೇಷ ಸಂಧರ್ಭಕ್ಕಾಗಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಈ ಸಮಾರಂಭವು “ಅಭಿಜಿತ್ ಮುಹೂರ್ತ”ದ ಸಮಯದಲ್ಲಿ ನಡೆದಿದ್ದು, ಧಾರ್ಮಿಕ ಕಾರ್ಯಕ್ರಮಕ್ಕೆ ಅತ್ಯಂತ ಶುಭ ಸಮಯವೆಂದು ಪರಿಗಣಿಸಲಾಗಿದೆ. ಶ್ರೀ ರಾಮ ಜನ್ಮಭೂಮಿ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾತನಾಡಿ, ಈ ಭವ್ಯ ಕಾರ್ಯಕ್ರಮದಲ್ಲಿ ಸುಮಾರು 6,000 ರಿಂದ 8,000 ಆಹ್ವಾನಿತ ಗಣ್ಯರಿದ್ದಾರೆ. ಇನ್ನು ಶ್ರೀರಾಮ ಲಲ್ಲಾನ ಸನ್ನಿಧಿಯಲ್ಲಿ ನಡೆಯುತ್ತಿರುವ ಈ ಮಂಗಳ ಕಾರ್ಯವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನ ಅಯೋಧ್ಯೆಗೆ ತಲುಪಿದ್ದಾರೆ ಎಂದು ತಿಳಿಸಿದ್ದಾರೆ. ಈ ಧ್ವಜಾರೋಹಣವು ವಿಜಯದ ಸಂಕೇತವಾಗಿದ್ದು ರಾಷ್ಟ್ರಕ್ಕೆ ವಿಶೇಷ ಮೈಲಿಗಲ್ಲಾಗಲಿದೆ ಎಂದು ಬಣ್ಣಿಸಲಾಗಿದೆ. 60 ಎಕರೆ ವ್ಯಾಪ್ತಿಯಲ್ಲಿ ನಿರ್ಮಿಸಲಾದ ದೇವಾಲಯದ ಸಂಕೀರ್ಣವು ಆಧುನಿಕ ವಿಶೇಷತೆಯೊಂದಿಗೆ ಭಕ್ತಾಭಿಮಾನಿಗಳನ್ನು ಸ್ವಾಗತಿಸಲು ಸಿದ್ಧವಾಗಿದೆ.

ಗುಜರಾತ್ನ ಅಹಮದಾಬಾದ್ನ ಪ್ಯಾರಾಚೂಟ್ ತಜ್ಞರು ವಿನ್ಯಾಸಗೊಳಿಸಿದ ಈ ಧ್ವಜವು ರಕ್ಷಣಾ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಎರಡರಿಂದ ಮೂರು ಕಿಲೋಗ್ರಾಂಗಳಷ್ಟು ತೂಗುತ್ತದೆ. 161 ಅಡಿ ಎತ್ತರದ ದೇವಾಲಯದ ಶಿಖರ ಮತ್ತು 42 ಅಡಿ ಎತ್ತರದ ಧ್ವಜಸ್ತಂಭಕ್ಕೆ ಹೊಂದಿಕೊಳ್ಳುವಂತೆ ಧ್ವಜವನ್ನು ವಿನ್ಯಾಸಗೊಳಿಸಲಾಗಿದೆ.

ಇದಕ್ಕೂ ಮೊದಲು, ರಾಮ ಮಂದಿರದಲ್ಲಿ ಧರ್ಮಧ್ವಜವನ್ನು ಉದ್ಘಾಟಿಸಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸನಾತನ ಸಂಸ್ಕೃತಿಯ ಪುನರುಜ್ಜೀವನದ ಈ ದೈವಿಕ ಸಂದೇಶವು ಭಾರತದಾದ್ಯಂತ ಅದಮ್ಯ ಆಧ್ಯಾತ್ಮಿಕ ಶಕ್ತಿಯನ್ನು ತುಂಬುತ್ತಿದೆ. ಲಕ್ಷಾಂತರ ರಾಮ ಭಕ್ತರ ನಂಬಿಕೆ, ತಪಸ್ಸು ಮತ್ತು ಹಂಬಲ ಇಂದು ಹೊಸ ಶಿಖರವನ್ನು ತಲುಪಲಿದೆ ಎಂದು ಹೇಳಿದರು..

ಒಟ್ಟಿನಲ್ಲಿ ಇವತ್ತು ಧ್ವಜ ಹಾರಿದ್ದು ಎಷ್ಟು ಮುಖ್ಯವೋ ಮೋದಿಯವರ ಭಕ್ತಿ ಭಾವ ಕೂಡ ಅಷ್ಟೇ ಸುದ್ದಿಯಾಗಿದೆ. ರಾಮರಾಜ್ಯ ಅಂದ್ರೆ ಬರೀಕಟ್ಟಡ ಅಲ್ಲ, ಅದು ಸಮರ್ಪಣಾ ಭಾವ. ಇವತ್ತು ಮೋದಿಯವರು ತಮ್ಮ ನಡುಗುವ ಕೈಗಳಲ್ಲಿ ಮಾಡಿದ ಆ ನಮಸ್ಕಾರ, ಇತಿಹಾಸ ಪುಟಗಳಲ್ಲಿ ಎಂದಿಗೂ ಅಚ್ಚರಿ ಮೂಡುತ್ತದೆ…
