
yuva rajkumar visits mantralaya raghavendra swamy murtt
(ಅಶ್ವವೇಗ) Ashwaveega News 24×7 ಜು.06: ʻಎಕ್ಕʼ ಸಿನಿಮಾ ಬಿಡುಗಡೆಗೆ ದಿನಗಣನೆ ಹಿನ್ನೆಲೆ ನಟ ಯುವ ರಾಜ್ಕುಮಾರ್ ಟೆಂಪಲ್ ರನ್ ನಡೆಸಿದ್ದಾರೆ. ಮಂತ್ರಾಲಯದಲ್ಲಿ ಗುರುರಾಯರ ದರ್ಶನ ಪಡೆದು, ಬಳಿಕ ರಾಯಚೂರಿನ ಹನುಮಾನ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಹೊಸ ಕೆಲಸ ಶುರು ಮಾಡೋದಕ್ಕೂ ಮುನ್ನ ಮಂತ್ರಾಲಯ ರಾಯರ ದರ್ಶನ ಮಾಡ್ತೇವೆ. ಎಕ್ಕ ಸಿನಿಮಾ ಶುರುವಾಗೋ ಮುನ್ನ ಕೂಡಾ ಮಂತ್ರಾಲಯದಲ್ಲಿ ಪೂಜೆ ಮಾಡಿಸಲಾಗಿತ್ತು. ರಾಯರೇ ದೊಡ್ಡ ಧೈರ್ಯ ನಮಗೆ. ರಾಯಚೂರಿನಲ್ಲಿ ಆಂಜನೇಯ ಸ್ವಾಮಿ ದರ್ಶನ ಸಹ ಪಡೆದಿದ್ದೇನೆ ಎಂದಿದ್ದಾರೆ.
ಮನುಷ್ಯನಲ್ಲಿ ಒಳ್ಳೆತನ ಕಾಪಾಡಿಕೊಳ್ಳಬೇಕು ಅನ್ನೋದೇ ಎಕ್ಕ ಸಿನಿಮಾದ ಸಂದೇಶ. ಜಾಕಿ ಸಿನಿಮಾ ಪಾತ್ರಗಳಿಂದ ಪ್ರೇರಿತರಾಗಿ ಈ ಚಿತ್ರವನ್ನು ಮಾಡಿದ್ದೇವೆ. ಬ್ಯಾಂಗಲ್ ಬಂಗಾರಿ ಹಾಡು ಹಿಟ್ ಆಗಿದೆ, ಇದಕ್ಕೆಲ್ಲಾ ದೇವರ ಆಶೀರ್ವಾದವೇ ಕಾರಣ ಸಂತಸ ವ್ಯಕ್ತಪಡಿಸಿದ್ದಾರೆ.
ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ಸೌಂಡ್ ಮಾಡುತ್ತಿದೆ. ಈ ಹಾಡಿನ ಹುಕ್ ಸ್ಟೆಪ್ಗೆ ಭರ್ಜರಿ ರೆಸ್ಪಾನ್ ಸಿಕ್ಕಿದೆ. ಇನ್ನೂ ನಟ ಯುವ ರಾಜ್ಕುಮಾರ್ ಹಾಗೂ ನಟಿ ಸಂಜನಾ ಆನಂದ್ ಅಭಿನಯದ ಎಕ್ಕ ಸಿನಿಮಾ ಇದೇ ಜುಲೈ 18ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.