Ashwaveega News 24×7 ಮಾರ್ಚ್ 04 – 2026 : ರಾಜ್ಯ ಬಜೆಟ್ ಮಂಡನೆಯ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾದದ್ದು ಡಿಸಿಎಂ ಡಿನ್ನರ್ ಮೀಟಿಂಗ್. ಮುಖ್ಯಮಂತ್ರಿ Siddaramaiah ಬಜೆಟ್ ಮಂಡನೆ ಮಧ್ಯೆ, ಉಪ ಮುಖ್ಯಮಂತ್ರಿ D. K. Shivakumar ಆಯೋಜಿಸಿದ ಔತಣಕೂಟ ಹಲವು ರಾಜಕೀಯ ಸಂದೇಶಗಳಿಗೆ ಕಾರಣವಾಗಿದೆ .
ಡಿನ್ನರ್ ಪಾರ್ಟಿ ಕೇವಲ ಸಂಭ್ರಮವೇ ? ಅಥವಾ ಅದರ ಹಿಂದೆ ಮೆಗಾ ಪ್ಲ್ಯಾನ್ ಇದೆಯೇ ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ . ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿದ ಸಂಭ್ರಮವೇ ? ಅಥವಾ ಸಿಎಂ ಸ್ಥಾನ ಸನಿಹಕ್ಕೆ ಬರುತ್ತಿರುವ ಸೂಚನೆ ಬೆನ್ನಲ್ಲೇ ಡಿನ್ನರ್ ರಾಜಕೀಯವೇ ? ಎಂಬ ಚರ್ಚೆ ಜೋರಾಗಿದೆ .
ಹೈಕಮಾಂಡ್ ನಾಯಕರಿಂದ ಸಿಹಿಸುದ್ದಿ ನಿರೀಕ್ಷೆಯಲ್ಲಿ ಇರುವ ಡಿಕೆಶಿ, ಬಜೆಟ್ ಬಳಿಕ ಅಧಿಕಾರ ಹಂಚಿಕೆ ಆಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ . ಇದೇ ವೇಳೆ, ಸಿಎಂ ಸ್ಥಾನ ಸಿಗುವ ಸಾಧ್ಯತೆ ಇದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹೊಸಬರಿಗೆ ಬಿಡುವ ಸಾಧ್ಯತೆಗಳ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ .
“ಪಟ್ಟದ ಫೈಟ್” ಮಧ್ಯೆ ಡಿಕೆಶಿ ಡಿನ್ನರ್ ಮೀಟಿಂಗ್ ಮೂಲಕ ಶಾಸಕರಿಗೆ ಗಾಳ ಹಾಕಿದ್ದಾರಾ ? ಎಂಬ ಪ್ರಶ್ನೆಯೂ ಎದ್ದಿದೆ . ದೆಹಲಿಯಿಂದ ವಾಪಸ್ ಆದ ಬಳಿಕ ಡಿಕೆಶಿ ಸೈಲೆಂಟ್ ಆಪರೇಷನ್ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ .
“ನಾನು ಸುಮ್ಮನೆ ಇದ್ದೀನಿ ಅಂದರೆ ಅದು ಅವರ ಅಭಿಪ್ರಾಯ. ನಾಯಕತ್ವ ವಿಚಾರ ಕಂಟಿನ್ಯೂ” ಎಂದು ಡಿಕೆಶಿ ಸಂದೇಶ ನೀಡಿರುವುದು ರಾಜಕೀಯ ತಾಪಮಾನವನ್ನು ಮತ್ತಷ್ಟು ಹೆಚ್ಚಿಸಿದೆ .
ಒಟ್ಟಿನಲ್ಲಿ, ಬಜೆಟ್ ಬಳಿಕ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ನಾಯಕತ್ವದ ಸಮೀಕರಣಗಳಿಗೆ ಹೊಸ ತಿರುವು ನೀಡಬಹುದೆಂಬ ಕುತೂಹಲ ಹೆಚ್ಚಿಸಿದೆ .
