Ashwaveega News 24×7 ಮಾರ್ಚ್ 04 – 2026 : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಇರಾನ್ ಕುರಿತು ಅಮೆರಿಕದ ನಿಲುವು ಮತ್ತೆ ಚರ್ಚೆಗೆ ಬಂದಿದೆ. ಅಮೆರಿಕದ ಮಾಜಿ ಅಧ್ಯಕ್ಷ Donald Trump, ಇರಾನ್ ಸರ್ಕಾರ ಬದಲಾವಣೆಯ ಬಗ್ಗೆ ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆಯೆಂಬ ವರದಿಗಳು ಹರಿದಾಡುತ್ತಿವೆ.
ಅಮೆರಿಕದ ಗುಪ್ತಚರ ಸಂಸ್ಥೆ Central Intelligence Agency (CIA), ಇರಾನ್ನ ವಿರೋಧ ಪಕ್ಷದ ನಾಯಕರು ಹಾಗೂ ಕುರ್ದಿಶ್ ಗುಂಪುಗಳೊಂದಿಗೆ ಮಾತುಕತೆ ನಡೆಸಿದೆಯೆಂಬ ಅಂತರಾಷ್ಟ್ರೀಯ ಮಾಧ್ಯಮ ವರದಿಗಳು ಹೊರಬಿದ್ದಿವೆ. ಇರಾನ್ನಲ್ಲಿ ದಂಗೆ ಏಳುವಂತೆ ಪ್ರಚೋದನೆ ನೀಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ದಂಗೆ ಉಂಟಾದರೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಲಾಗಿದೆ . ಅಮೆರಿಕ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಸರ್ಕಾರ ತರಲು ಯತ್ನಿಸುತ್ತಿದೆ ಎಂಬ ವಿಶ್ಲೇಷಣೆಗಳು ವ್ಯಕ್ತವಾಗಿವೆ.
ಇರಾನ್ನ ಅಧ್ಯಕ್ಷ Masoud Pezeshkian ನೇತೃತ್ವದ ಸರ್ಕಾರವನ್ನು ಕೆಡವಲು ಅಮೆರಿಕ ಸರ್ವ ಪ್ರಯತ್ನ ಮಾಡುತ್ತಿದೆ ಎಂಬ ರಾಜಕೀಯ ವಲಯದ ಮಾತುಗಳು ಕೇಳಿಬರುತ್ತಿವೆ.
ಇದಕ್ಕೂ ಮೀರಿಸಿ, “ಶೀಘ್ರವೇ ಮೂರನೇ ವೇವ್ ಬರುತ್ತದೆ” ಎಂದು ಟ್ರಂಪ್ ಭವಿಷ್ಯ ನುಡಿದಿದ್ದಾರೆ .“ನಾವು ಟಾರ್ಗೆಟ್ ಮಾಡಿದ ನಾಯಕರೆಲ್ಲ ಫಿನಿಷ್ ಆಗಿದ್ದಾರೆ. ಇರಾನ್ ನೌಕಾಪಡೆ ಮತ್ತು ವಾಯುಪಡೆ ಶಕ್ತಿಯನ್ನು ಕುಂಠಿತಗೊಳಿಸಿದ್ದೇವೆ” ಎಂದು ಅವರು ಹೇಳಿದ್ದಾರೆಯೆಂಬ ವರದಿಗಳು ಪ್ರಸಾರವಾಗಿವೆ.
ಆದರೆ ಈ ಹೇಳಿಕೆಗಳಿಗೆ ಅಧಿಕೃತ ದೃಢೀಕರಣಗಳಿಲ್ಲ. ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಈ ಬೆಳವಣಿಗೆಗಳು ಗಂಭೀರ ಚರ್ಚೆಗೆ ಕಾರಣವಾಗಿವೆ.
ಒಟ್ಟಿನಲ್ಲಿ, ಇರಾನ್–ಅಮೆರಿಕ ನಡುವಿನ ಈ ರಾಜಕೀಯ ಸಂಘರ್ಷ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ ಇದರ ಪರಿಣಾಮಗಳತ್ತ ವಿಶ್ವದ ಗಮನ ನೆಟ್ಟಿದೆ.
