Ashwaveega News 24×7 ಮಾರ್ಚ್ 04 – 2026 : ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ಸಂಘರ್ಷದ ನಡುವೆ ವಿಚಿತ್ರ ಜ್ಯೋತಿಷ್ಯ ಕತೆ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಮೆರಿಕದ ಖ್ಯಾತ ಜ್ಯೋತಿಷಿಯೊಬ್ಬರು ನೀಡಿದ ಮಾಹಿತಿ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಅಮೆರಿಕದ ಮಾಜಿ ಅಧ್ಯಕ್ಷ Donald Trump ಚಂದ್ರಗ್ರಹಣದ ದಿನ ಜನಿಸಿದ್ದಾರಂತೆ. ಅದೇ ರೀತಿ, ಇಸ್ರೇಲ್ ಪ್ರಧಾನಮಂತ್ರಿ Benjamin Netanyahu ಕೂಡ ಗ್ರಹಣದ ಪ್ರಭಾವದ ದಿನವೇ ಹುಟ್ಟಿದ್ದಾರೆ ಎಂಬ ಮಾಹಿತಿ ಹಂಚಲಾಗಿದೆ. ಇನ್ನು ಇರಾನ್ನ ಪರಮೋಚ್ಛ ನಾಯಕ Ali Khamenei ಸೂರ್ಯಗ್ರಹಣದ ದಿನ ಜನಿಸಿದ್ದಾರೆ ಅಂತೆ .
ಈ ಮೂವರು ನಾಯಕರು ಈಗ ಮಧ್ಯಪ್ರಾಚ್ಯದ ರಾಜಕೀಯ ಬೆಳವಣಿಗೆಗಳ ಕೇಂದ್ರಬಿಂದುವಾಗಿದ್ದು, ಅವರ ಜನ್ಮ ದಿನಾಂಕ ಮತ್ತು ಗ್ರಹಣದ ಸಂಧರ್ಭವನ್ನು ಜೋಡಿಸಿ ಜ್ಯೋತಿಷ್ಯ ವಿಶ್ಲೇಷಣೆಗಳು ನಡೆಯುತ್ತಿವೆ.
“ಗ್ರಹಣದ ದಿನ ಹುಟ್ಟಿದ ನಾಯಕರು ಯುದ್ಧೋನ್ಮಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ” ಎಂಬ ರೀತಿಯ ಪೋಸ್ಟ್ಗಳು ಹರಿದಾಡುತ್ತಿವೆ. ಆದರೆ ಇವುಗಳಿಗೆ ಯಾವುದೇ ವೈಜ್ಞಾನಿಕ ಅಥವಾ ಅಧಿಕೃತ ಆಧಾರವಿಲ್ಲ . ಟ್ರಂಪ್, ನೆತನ್ಯಾಹು ಮತ್ತು ಖಮೇನಿ ಅವರ ನಿರ್ಧಾರಗಳೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಗೆ ಕಾರಣವಾಗಿವೆ . ಈ ಜ್ಯೋತಿಷ್ಯ ಕತೆ ಮತ್ತಷ್ಟು ಕುತೂಹಲ ಹುಟ್ಟಿಸಿದೆ.
ಒಟ್ಟಿನಲ್ಲಿ, ಗ್ರಹಣ–ರಾಜಕೀಯ ಕೊಂಡಿ ಕುರಿತ ಈ ಮಾಹಿತಿ ವೈರಲ್ ಆಗಿದ್ದರೂ, ಇದನ್ನು ಕೇವಲ ಜ್ಯೋತಿಷ್ಯ ಅಭಿಪ್ರಾಯವೆಂದು ಮಾತ್ರ ಪರಿಗಣಿಸಬೇಕೆಂಬ ಎಚ್ಚರಿಕೆ ವ್ಯಕ್ತವಾಗಿದೆ.
