Ashwaveega News 24×7 ಮಾರ್ಚ್ 04 – 2026 : ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ಸನ್ನಿವೇಶ ನಿರ್ಮಾಣವಾಗಿದೆ . ಎಂಬ ಶೀರ್ಷಿಕೆಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆತಂಕಕಾರಿ ವರದಿಗಳು ಹರಿದಾಡುತ್ತಿವೆ. “ವಿಶ್ವದ ದೊಡ್ಡಣ್ಣ” ಎಂದೇ ಕರೆಯಲ್ಪಡುವ United States ಹಾಗೂ Israel ಸೇರಿ Iran ಮೇಲೆ 2 ಸಾವಿರಕ್ಕೂ ಹೆಚ್ಚು ಕಡೆ ದಾಳಿ ನಡೆಸಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇರಾನ್ ರಾಜಧಾನಿ Tehran ಮೇಲೆ ಕ್ಷಿಪಣಿ ಸುರಿಮಳೆ ನಡೆಸಲಾಗಿದ್ದು, 1000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂಬ ದಾವೆ ಮಾಡಲಾಗಿದೆ. ಜೊತೆಗೆ Isfahan, Qom ಹಾಗೂ Urmia ನಗರಗಳನ್ನೂ ಗುರಿಯಾಗಿಸಲಾಗಿದೆ. ಇರಾನ್ನ ವಾಯು ರಕ್ಷಣಾ ವ್ಯವಸ್ಥೆಯ ರೆಡಾರ್ ಕೇಂದ್ರಗಳು ಧ್ವಂಸಗೊಂಡಿವೆ ಅಂತೆ .
ಇದೇ ವೇಳೆ Lebanon ನ Baalbek ಹಾಗೂ ರಾಜಧಾನಿ Beirut ನಲ್ಲಿ ಸ್ಫೋಟಗಳಾಗಿವೆ ಎಂಬ ವರದಿಗಳೂ ವೈರಲ್ ಆಗಿವೆ. ಬೈರುತ್ನಲ್ಲಿ ಕ್ಷಿಪಣಿ ದಾಳಿಗೆ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ಹಜ್ಮಿಯೆಹ್ ಪ್ರದೇಶದಲ್ಲಿರುವ ಹೋಟೆಲ್ ಮೇಲೆ ಡ್ರೋನ್ ದಾಳಿ ನಡೆದಿದೆಯೆಂಬ ಆರೋಪವೂ ಕೇಳಿಬಂದಿದೆ.
ಕೆಲವು ಪೋಸ್ಟ್ಗಳಲ್ಲಿ ಶಾಲೆಗಳನ್ನೂ ಗುರಿಯಾಗಿಸಿ ದಾಳಿ ನಡೆಸಲಾಗಿದೆ, ಬೃಹತ್ ಕಟ್ಟಡಗಳ ಅಡಿಯಲ್ಲಿ ನಾಗರಿಕರು ಸಿಲುಕಿದ್ದಾರೆ ಎಂಬ ಗಂಭೀರ ಆರೋಪಗಳೂ ಸೇರಿವೆ.
