Ashwaveega News 24×7 ಮಾರ್ಚ್ 04 – 2026 : ಬಹುನೀರಿಕ್ಷಿತ Toxic ಚಿತ್ರದ ರಿಲೀಸ್ ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ . ಮಾರ್ಚ್ 19 ರಂದು ವಿಶ್ವದಾದ್ಯಂತ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಇದೀಗ ಜೂನ್ 4ಕ್ಕೆ ಪೋಸ್ಟ್ಪೋನ್ ಆಗಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ .
ನಟ Yash ಅಭಿನಯದ ಈ ಭಾರಿ ಬಜೆಟ್ ಚಿತ್ರಕ್ಕಾಗಿ ದೇಶ – ವಿದೇಶಗಳಲ್ಲಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿ ಹಿನ್ನೆಲೆ, ಚಿತ್ರವನ್ನು ಈಗ ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂದು ನಿರ್ಮಾಪಕರು ಈ ನಿರ್ಧಾರಕ್ಕೆ ಬಂದಿದೆ.
ಇರಾನ್ – ಇಸ್ರೇಲ್ ಸಂಘರ್ಷದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಉಂಟಾಗಿದ್ದು, ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಸಿನಿಮಾ ವಿತರಣೆ ಹಾಗೂ ಪ್ರಚಾರ ಚಟುವಟಿಕೆಗಳಿಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದಲೇ ವರ್ಲ್ಡ್ವೈಡ್ ರಿಲೀಸ್ ಪ್ಲಾನ್ಗೆ ಬ್ರೇಕ್ ಹಾಕಲಾಗಿದೆ.
“ಯುದ್ಧದ ಸಂದರ್ಭದಲ್ಲೇ ಸಿನಿಮಾ ಬಿಡುಗಡೆ ಮಾಡುವುದರಿಂದ ವ್ಯತಿರಿಕ್ತ ಪರಿಸ್ಥಿತಿ ಎದುರಾಗಬಹುದು” ಎಂಬ ಕಾರಣವನ್ನು ಚಿತ್ರತಂಡ ಉಲ್ಲೇಖಿಸಿದೆ . ಭಾರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಪ್ಯಾನ್-ಇಂಡಿಯಾ ಸಿನಿಮಾ, ಜಾಗತಿಕ ಮಟ್ಟದಲ್ಲಿ ಒಂದೇ ದಿನ ಬಿಡುಗಡೆಯಾಗಬೇಕಿದ್ದುದರಿಂದ ಸಮಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ.
ಒಟ್ಟಿನಲ್ಲಿ, ಕುತೂಹಲ ಕೆರಳಿಸಿದ್ದ ‘ಟಾಕ್ಸಿಕ್’ ಚಿತ್ರದ ರಿಲೀಸ್ ಮುಂದೂಡಿಕೆ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದು, ಈಗ ಎಲ್ಲರ ಕಣ್ಣು ಜೂನ್ 4ರತ್ತ ನೆಟ್ಟಿದೆ.
