Ashwaveega News 24×7 ಅಕ್ಟೋಬರ್. 27:ಭಾರತದಲ್ಲಿ ‘ಬಿಗ್ ಬಾಸ್ʼ ಒಂದು ಅತೀ ಜನಪ್ರಿಯವಾದ ರಿಯಾಲಿಟಿ ಶೋ. ಆದ್ರೆ ಬಿಗ್ ಬಾಸ್ ಹಿಂದಿರುವ ನಿಜವಾದ ಕಹಾನಿ 99% ಜನರಿಹೆ ಇನ್ನೂ ಗೊತ್ತಿಲ್ಲ. ಇದ್ರ ಕುರಿತು ನಾವು ಹೇಳ್ತಿವಿ ಕೇಳಿ.
‘ಬಿಗ್ ಬಾಸ್’ ನಿಜವಾಗಿ ಒಂದು ಶೋ ಆಗಿ ಮೊದಲಿಗೆ ಆರಂಭವಾಗಿರಲಿಲ್ಲ. ಮೊದಲಿಗೆ ಯುರೋಪ್ನಲ್ಲಿ ‘ಬಿಗ್ ಬ್ರದರ್’ ಶೋ ಅನ್ನು ಜಾನ್ ಡೆ ಮೊಲ್ ಎಂಬ ನಿರ್ಮಾಪಕ ಪ್ರಾರಂಭಿಸ್ತಾನೆ. ಈತನಿಗೆ ಈ ಶೋ ಆರಂಭಿಸಲು ಪ್ರಮುಖ ಪ್ರೇರಣೆ ಎಂದರೆ ವಿಜ್ಞಾನಿಗಳ ಪ್ರಯೋಗ ಎನ್ನುವುದು ಯಾರಿಗೂ ತಿಳಿಯದ ಸತ್ಯ..!
ಹೌದು, ಬಿಗ್ಬಾಸ್ ಹುಟ್ಟಿನ ಕಥೆ ನೋಡುವುದಾದರೆ, 1991ರಲ್ಲಿ ಅಮೆರಿಕದ ಬೈಯೋಸ್ಪೇರ್ ಎಂಬ ಭೂವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಗಳು ಒಂದು ಭೂಮಿ ಆಕಾರದ ಕೋಣೆಯೊಳಗೆ ಕೆಲವರನ್ನು ಇರುಸುತ್ತಾರೆ. ಅನೇಕ ದಿನಗಳ ನಂತರ ಈ ಕೋಣೆಯಲ್ಲಿ ಇರುವವರ ಆರೋಗ್ಯ ಮತ್ತು ಮನಸ್ಥಿತಿ ಬಗ್ಗೆ ತಿಳಿದುಕೊಲ್ಳುವುದು ಈ ಪ್ರಯೋಗ ದ ಉದ್ದೇಶವಾಗಿತ್ತು.
ನಂತರದಲ್ಲಿ ಈ ಪ್ರಯೋಗವೇ ಒಂದು ರಿಯಾಲಿಟಿ ಶೋ ಆಗಿ ಬದಲಾಗುತ್ತದೆ. ಹೌದು, 1997ರಲ್ಲಿ ಜಾನ್ ಡೆ ಮೊಲ್ ಎಂಬುವವನು ಹೊಸ ಶೋ ಆರಂಭಿಸಲು ಚಿಂತಿಸಿದಾಗ ಆತನಿಗೆ ಈ ಪ್ರಯೋಗವೇ ಪ್ರೇರಣೆಯಾಯಿತು. ಆದರೆ ಈ ಶೋ ಗೆ ಮೊದಲಿಗೆ ‘ದಿ ಗೋಲ್ಡನ್ ಕೇಜ್’ ಎಂದು ಹೆಸರಿಡಲಾಗಿತ್ತು. ನಂತರದ ದಿನಗಳಲ್ಲಿ ಇದನ್ನು ಬಿಗ್ ಬ್ರದರ್ ಎಂದು ಬದಲಿಸಲಾಯಿತು.
ಮೊದಲಿಗೆ ಈ ಶೋ ಅಷ್ಟಾಗಿ ಜನಪ್ರಿಯತೆ ಗಳಿಸಿರಲಿಲ್ಲ. ನಂತರದಲ್ಲಿ ಈ ಶೋ ಗೆ ಬಿಗ್ ಬ್ರದರ್ ಎಂದು ಹೆಸರು ಬದಲಿಸಿ, ಶೋ ನಲ್ಲಿ ಆಟ, ಸಂಗೀತ, ಮನೋರಂಜನೆಯನ್ನು ಇಡಲಾಯಿತು. ಅಲ್ಲದೇ ಎಲಿಮಿನೇಶನ್ ಮಾದರಿಯನ್ನು ಆರಂಭಿಸಿದಾಗ ಶೋ ನಿಧಾನವಾಗಿ ಜನರಿಗೆ ಇಷ್ಟವಾಯಿತು. ಐಷಾರಾಮಿ ಮನೆಯಲ್ಲಿ 106 ದಿಗಳ ಕಾಲ ಮೊದಲ ಶೋ ನಡೆಯಿತು.
ವಿದೇಶಗಳಲ್ಲಿ ಹೆಚ್ಚು ಪ್ರಸಿದ್ಧವಾದ ಈ ಬಿಗ್ ಬ್ರದರ್ ಶೋ ಅವನ್ನು ಮೊದಲಿಗೆ ಭಾರತದಲ್ಲಿ ಹಿಂದಿಯಲ್ಲಿ ಪ್ರಸಾರ ಮಾಡಲು ಹಕ್ಕನ್ನು ಖರೀದಿಸಲಾಯಿತು. ಬಳಿಕ ಹಿಂದಿಯ ನಂತರ ಕನ್ನಡ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ಅನೇಕ ಭಾಷೆಗಳಲ್ಲಿ ಈ ಶೋ ಅನ್ನು ಪ್ರಾರಂಬಿಸ್ತಾರೆ.
ಬಿಗ್ ಬ್ರದರ್ 5ನಲ್ಲಿ ಭಾರತದ ನಮ್ಮ ಶಿಲ್ಪಾ ಶೆಟ್ಟಿ ಭಾಗವಹಿಸಿ ವಿನ್ನರ್ ಆಗ್ತಾರೆ. ಆ ಸಮಯದಲ್ಲಿ ಜನಾಂಗೀಯತೆ, ವರ್ಣ ದ್ವೇಷ ವಿಚಾರವೂ ಚರ್ಚೆಗೆ ಬಂದಿತು. ಈ ರೀತಿ ವಿದೇಶಿ ನೆಲದಲ್ಲಿ ಶಿಲ್ಪಾ ಶೆಟ್ಟಿ ಗೆದ್ದು ಬಂದ ಬಳಿಕ ಭಾರತೀಯರಿಗೂ ಈ ಬಿಗ್ಬಾಸ್ ಶೋ ಕುರಿತು ಕ್ರೇಜ್ ಹೆಚ್ಚಾಯಿತು. ಈ ಶೋ ಸೋನಿ ಟಿವಿಯಿಂದ ವಿಯಾಕನ್ 18ನ ಕಲರ್ಸ್ ಟೀವಿಗೆ ಶಿಫ್ಟ್ ಆಯಿತು. ಹೀಗೆ ಕಾಲ ಕ್ರಮೇಣ ಹಿಂದಿ ಭಾಷೆಯಲ್ಲಿ ಜನಪ್ರಿಯತೆ ಪಡೆದ ಬಿಗ್ಬಾಸ್ ಭಾರತದ ಇತರೆ ಭಾಷೆಗಳಲ್ಲಿಯೂ ಆರಂಭವಾಯಿತು.
